Sunday, June 7, 2009

ಬೃಹತೀ ಸಹಸ್ರಯಾಗ

ಶ್ರೀ ದಿಗ್ವಿಜಯ ಮೂಲರಾಮೋ ವಿಜಯತೇ
ಮಾಧ್ವ ಯುವ ವೇದಿಕೆ,
(ಶ್ರೀ ಮಾಧ್ವ ಸಂಘ)
ಶ್ರೀ ಉತ್ತರಾದಿ ಮಠ, ಮೈಸೂರು.
--------------------------------------------------------------
ಅಧ್ಯಾತ್ಮ ಬಂಧುಗಳೇ,
ಈ ಹಿಂದೆ, “ಹರಿ-ಸಿರಿ ಸ್ತುತಿ ಸುರಭಿ” ಎಂಬ “ಶ್ರೀ ವಿಷ್ಣು ಸಹಸ್ರನಾಮ” ಹಾಗೂ “ಶ್ರೀ ಲಕ್ಷ್ಮೀ ಶೋಭಾನೆಯ ಕೋಟಿ
ಪಾರಾಯಣ ಯಜ್ಞ”ದ ಸಂಕಲ್ಪ ಸಮಾರಂಭಕ್ಕೆ ತಾವೆಲ್ಲರೂ ಭಾಗವಹಿಸಿ,
ಸಂಕಲ್ಪಿಸಿ, ಸ್ತುತಿಸಿ, ಸರ್ವೋತ್ತಮನಿಗೆ ಸಮರ್ಪಿಸಲು ಸಿದ್ಧರಾಗಿರುವಿರಿ.
ಈ ಪಾರಯಣ ಯಜ್ಞದ ಸಮಾಪ್ತಿಯ ದ್ಯೋತಕವಾಗಿ ಹಾಗೂ ಸಮರ್ಪಣಾ ಸಮಾರಂಭವಾಗಿ
ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ, ಶ್ರೀ ಮದುತ್ತರಾದಿ ಮಠಾಧೀಶರಾದ
ಶ್ರೀ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀ ಪಾದಂಗಳವರ ದಿವ್ಯ ಸಾನಿಧ್ಯದಲ್ಲಿ,
ಭಕ್ತರಿಗೆ ಕಾಮಧೇನುವಾಗಿ, ಅಭೀಷ್ಟವನ್ನು ಅನುಗ್ರಹಿಸುವ,
ಶ್ರೀ ಶ್ರೀ ಸತ್ಯಸಂಕಲ್ಪತೀರ್ಥ ಶ್ರೀ ಪಾದಂಗಳವರ ಆರಾಧನೆಯ ಪರ್ವಕಾಲದಲ್ಲಿ,
ಮಾಧ್ವ ಯುವ ವೇದಿಕೆಯ ಸಾರಥ್ಯದಲ್ಲಿ, ಮಾಧ್ವ ಸಂಘದ ಸಹಕಾರದೊಂದಿಗೆ
"ಬೃಹತೀ ಸಹಸ್ರಯಾಗ"

ವನ್ನು ಹಮ್ಮಿಕೊಳ್ಳಲಾಗಿದೆ.
ಭಗವಂತನಿಗೆ ಅತ್ಯಂತ ಪ್ರಿಯವಾದ, ಭಗವಂತನ ಆದೇಶದ ಮೇರೆಗೆ ವಿಶ್ವಾಮಿತ್ರರಿಂದ ಪುನರಾವರ್ತನೆಯಾಗಿ, ಸ್ತುತಿಸಲ್ಪಟ್ಟ, ಋಗ್ವೇದದ ಬೇರೆ ಬೇರೆ ಮಂತ್ರಗಳ ಸಮೂಹವೇ “ಬೃಹತೀ ಸಹಸ್ರ”.
ಬೃಹತೀ ಸಹಸ್ರದ 1000 ಋಕ್ಕುಗಳಲ್ಲಿನ, 72000 ಸ್ವರ ವ್ಯಂಜನಗಳು, ಪಿಂಡಾಂಡದಲ್ಲಿನ (ಮನುಷ್ಯನ ದೇಹ) 72000 ನಾಡಿಗಳನ್ನು ಪ್ರತಿಬಿಂಬಿಸುವ 72000 (36000 ಪುರುಷ ಹಾಗೂ ಸ್ತ್ರೀ ರೂಪಗಳು) ಭಗವಂತನ ರೂಪಗಳ ಸ್ತುತಿಯಾಗಿ, ಮನುಷ್ಯನ ಆಂತರಿಕ ಆರೋಗ್ಯವನ್ನು ವೃದ್ಧಿಸುತ್ತದೆ. ಅಲ್ಲದೆ ಪ್ರಕೃತಿಯಲ್ಲಿನ 36000 ಹಗಲು ಮತ್ತು 36000 ರಾತ್ರಿಗಳನ್ನು ಪ್ರತಿಬಿಂಬಿಸುವ ಮೂಲಕ, ಮನುಷ್ಯನಿಗೆ 100 ವರ್ಷ (100ವರ್ಷ= 36000 ದಿನಗಳು) ಆಯಸ್ಸನ್ನು ಅನುಗ್ರಹಿಸುವ ಯಜ್ಞನಾಮಕ ಪರಮಾತ್ಮನ ಅಭಿನ್ನ ರೂಪವೇ, ಈ ಯಜ್ಞ.
ಇಂತಹ ಯಜ್ಞದಲ್ಲಿ ಪಾಲ್ಗೊಳ್ಳಿ, ಕೃತಾರ್ಥರಾಗಿ,

ಮಾರ್ಗರ್ಶನ-ಪಂ. ಶ್ರೀ ಸತ್ಯಧ್ಯಾನಾಚಾರ್ಯ ಕಟ್ಟಿ, ಪ್ರಾಂಶುಪಾಲರು, ಶ್ರೀ ಜಯತೀರ್ಥ ವಿದ್ಯಾಪೀಠ, ಶ್ರೀ ಉತ್ತರಾದಿ ಮಠ, ಬೆಂಗಳೂರು.

ನೇತೃತ್ವ- ಎಸ್. ಎ. ರಾಮದಾಸ್, ಶಾಸಕರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಗಳು, ಕರ್ನಾಟಕ ಸರ್ಕಾರ.
ಕಾರ್ಯಕ್ರಮದ ಪಕ್ಷಿನೋಟ :

ದಿನಾಂಕ 5 ನೇ ಜುಲೈ 2009 (ಭಾನುವಾರ)

ಬೆಳಿಗ್ಗೆ-ಕಲಶ ಸ್ಥಾಪನ, ಅಗ್ನಿ ಪ್ರತಿಷ್ಠಾಪನ, ಹೋಮ ಪ್ರಾರಂಭ, ಸಂಸ್ಥಾನ ಪೂಜಾ, ತೀರ್ಥಪ್ರಸಾದ

ಸಾಯಂಕಾಲ-ಪಂಡಿತರಿಂದ ಪ್ರವಚನ ಹಾಗೂ ವಿಚಾರಗೋಷ್ಠಿ, ಶ್ರೀ ಶ್ರೀಗಳವರಿಂದ ಆಶೀರ್ವಚನ

ದಿನಾಂಕ 6ನೇ ಜುಲೈ 2009 (ಸೋಮವಾರ)

ಕೋಟಿ ಪಾರಾಯಣ ಸಮರ್ಪಣಾ, ಪೂರ್ಣಾಹುತಿ

ದಿನಾಂಕ 7ನೇ ಜುಲೈ2009 (ಮಂಗಳವಾರ)

ಶ್ರೀ ಶ್ರೀ ಸತ್ಯಸಂಕಲ್ಪತೀರ್ಥ ಶ್ರೀಪಾದಂಗಳವರ ಆರಾಧನಾ
--------------------

ಸಂಸ್ಥಾನ ಪೂಜೆ ಹಾಗೂ ತೀರ್ಥ ಪ್ರಸಾದ,
ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಕೋಟಿ ಪುಷ್ಪಾರ್ಚನೆ ಹಾಗೂ ಸಾಮೂಹಿಕ ಭಜನೆ.
ಸಾಮೂಹಿಕ ಲಕ್ಷ್ಮೀಶೋಭಾನ ಪಠಣ, ಶ್ರೀ ಲಕ್ಷ್ಮೀನಾರಾಯಣ ಪೂಜೆ ಹಾಗೂ ಬಾಗಿನ ಸಮರ್ಪಣೆ.
ಭಗವಂತನ ಉತ್ಸವದೊಂದಿಗೆ, ಪ್ರದಕ್ಷಿಣಾ ನಮಸ್ಕಾರ.
ಪ್ರತಿ ದಿನ ಸುಪ್ರಸಿದ್ಧ ವಿದ್ವಾಂಸರುಗಳಿಂದ ಪ್ರವಚನ ಹಾಗೂ ವಿಚಾರ ಗೋಷ್ಠಿ, ಶ್ರೀ ಶ್ರೀಗಳವರಿಂದ ಆಶೀರ್ವವಚನ
ಸಾರ್ಥಕ ಸುಮ ಸಮರ್ಪಣಾ
(ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಹಸ್ತ).

ಪರಾತ್ಪರನ ದರ್ಶನ, ಪರಮಹಂಸರ ಸಂದರುಶನ, 9 ಕೋಟಿ ಮಂತ್ರಗಳ ಜಪದಿಂದ ಬರುವ ಪುಣ್ಯ ವಿಶೇಷದ ಸಂಪಾದನೆಗಾಗಿ, ಸಕಲ ಅಭೀಷ್ಟ ಪ್ರಾಪ್ತಿಗಾಗಿ ಸಕಲ ಪಾಪಗಳ ಪರಿಹಾರಾರ್ಥವಾಗಿ ಒದಗಿ ಬಂದಿರುವ ಈ ಸುಸಂದರ್ಭದಲ್ಲಿ ನಾವೆಲ್ಲರೂ ಭಾಗಿಯಾಗೋಣ.
ಸೇವಾ ವಿವರ ಮೊತ್ತ
ತುಲಾಭಾರ -10,000/-
ಆರಾಧನಾ ಸರ್ವ ಸೇವಾ- 5,000/-
ಸಾಮೂಹಿಕ ಯತಿ ಭಿಕ್ಷಾ -2,000/-
ಬೃಹತೀ ಯಜ್ಞ ಕಲಶ ಸೇವಾ- 250/-
ಕೋಟಿ ಯಜ್ಞ ಪುಷ್ಪಾರ್ಚನೆ- 100/-

ದ್ರವ್ಯರೂಪದಲ್ಲೂ ಸೇವೆಯನ್ನು ಸಲ್ಲಿಸಬಹುದು.
ಸೇವೆಯನ್ನು ಸಮರ್ಪಿಸುವವರು ಶ್ರೀ ಎಸ್.ಎಸ್. ರವಿ-9916281972 ಯವರನ್ನು ದಯಮಾಡಿ ಸಂಪರ್ಕಿಸಿ.
ವೇದಿಕೆಯಿಂದ ಸ್ವೀಕರಿಸಿದ ಹುಂಡಿಯನ್ನು ಸಮರ್ಪಿಸಲು ದಯಮಾಡಿ ವೇದಿಕೆಯ ಕಾರ್ಯಕಾರಿಣಿ. ಸದಸ್ಯರನ್ನು ಸಂಪರ್ಕಿಸಿ, ಅಧಿಕೃತವಾದ ರಸೀದಿಯನ್ನು ಪಡೆಯಬೇಕಾಗಿ ವಿನಂತಿ.
ಹುಂಡಿಯನ್ನು ಸಮರ್ಪಿಸುವಾಗಿ ತಮ್ಮ ಹೆಸರು, ಗೋತ್ರ, ನಕ್ಷತ್ರಗಳನ್ನು ತಪ್ಪದೇ ನೀಡಬೇಕಾಗಿ ವಿನಂತಿ.
ಹೆಚ್ಚಿನ ಮಾಹಿತಿ ಹಾಗೂ ಹುಂಡಿಯ ಸಮರ್ಪಣೆಗೆ ಸಂಪರ್ಕಿಸಿ:
ಶ್ರೀ ಗುರುಪ್ರಸಾದ್-9844076899 ಶ್ರೀ ಪಿ.ಎನ್.ಭಾನು ಪ್ರದೀಪ್ ಪಾಂಡುರಂಗಿ-9880248292

ಶ್ರೀ ಎಸ್.ಎಸ್.ರವಿ-9916281972 ಶ್ರೀ ಮದುಸೂಧನ್-9008712056

ಶ್ರೀ ಗಿರಿಧರ್-9342443331 ಶ್ರೀ .ಕೆ.ಪಿ ಮಧುಸೂದನ್ -9986188436

ಶ್ರೀ ಮಧ್ವೇಶ್ ಮನ್ನಾರಿ-9448390749 ಶ್ರೀ ಕೃಷ್ಣ ಸುಧಿ-9880546668

ಶ್ರೀ ಆನಂದ-9342420995 ಶ್ರೀ ವಿಜಯೀಂದ್ರ ನಾಯಕ್-9448601751

ಶ್ರೀ ಪಿ.ರಾಘವೇಂದ್ರ. -9480491478 ಶ್ರೀ ಗಿರೀಶ್-9900251453
ಶ್ರೀ ಸಂಜೀವ-9901668921 ಶ್ರೀ ಕೀರ್ತಿನಾರಾಯಣ್-9880046471
ಶ್ರೀ ಸುಧಾಕರ್-0821-2485425

E-mail: madhwayuvavedike@yahoo.co.in
madhwayuvavedike@gmail.com
website: www.madhwayuvavedike.blogspot.com

Wednesday, March 18, 2009

CARRIER WORKSHOP

||HARI SARVOTTAMA|| ||VAYU JEEVOTTAMA||

With the blessings of His Holiness
Sri Sri 1008 Satyatma Teertharu
JAYA SATYA PRAMODA NIDHI (REGD)
(Scholarship Trust from Sri Uttaradi Math)

And Madhwa Yuva Vedike has jointly organized a workshop

on
“Career Workshop”

By
“JSPN TEAM“

On

Sunday, March 29 2009 at 08:30 AM to 11:30 AM
At
Sri Uttaradi Mutt, Opp. Gun House, Palace Road, Mysore,

We request all graduates and job seekers to avail this golden opportunity to enrich and explore the best avenues to build your career.

For Registration, please contact:

Guru Prasad G 9844076899
Valmiki Sanjeev 9901668921
Arjun M 9900282925
Srikanth S R 9972518181
Gururaja .S 9845344256
Sridhar G 9880707868

Thursday, February 5, 2009

ಶ್ರೀ ವಾರಿ ಸೇವೆ

ಶ್ರೀ ದಿಗ್ವಿಜಯ ಮೂಲರಾಮೋ ವಿಜಯತೇ
ಮಾಧ್ವ ಯುವ ವೇದಿಕೆ
ಶ್ರೀ ಉತ್ತರಾದಿ ಮಠ, ಖಿಲ್ಲೆ ಮೊಹಲ್ಲ, ಮೈಸೂರು-04
madhwayuvavedike@gmail.com
-----------------------------------------------------------------------------------------------
ಈ ಹಿಂದೆ "ಹರಿ-ಸಿರಿ ಸ್ತುತಿ ಸುರಭಿ" ಎಂಬ
"ಶ್ರೀ ವಿಷ್ಣು ಸಹಸ್ರನಾಮ ಹಾಗೂ "ಶ್ರೀ ಲಕ್ಷ್ಮೀ ಶೋಭಾನೆಯ ಕೋಟಿ ಪಾರಾಯಣ ಯಜ್ಞ"
ಸಂಕಲ್ಪಿಸಿದ, ಒಂದು ವರ್ಷ ಅವಧಿಯ ಸಮಾಪ್ತಿಯ ದ್ಯೋತಕವಾಗಿ ಹಾಗು
ಸಮರ್ಪಣಾ ಸಮಾರಂಭದ ಪೂರ್ವಭಾವಿಯಾಗಿ
ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನ ಶ್ರೀಮದುತ್ತರಾದಿ ಮಠಾಧೀಶರಾದ

ಶ್ರೀ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ ಆಜ್ಞಾನುಸಾರ,
ಪಂ. ಶ್ರೀ ಸತ್ಯಧ್ಯಾನಾಚಾರ್ಯ ಕಟ್ಟಿ, ಶ್ರೀ ಉತ್ತರಾದಿ ಮಠ, ಬೆಂಗಳೂರು. ಇವರ ಮಾರ್ಗದರ್ಶನದೊಂದಿಗೆ
ಶ್ರೀಯುತ ಎಸ್.ಎ. ರಾಮದಾಸ್, ಗೌರವಾಧ್ಯಕ್ಷರು, ಮಾಧ್ವ ಯುವ ವೇದಿಕೆ. ಇವರ ನೇತೃತ್ವದಲ್ಲಿ,
ಮಾಧ್ವ ಯುವ ವೇದಿಕೆಯ ವತಿಯಿಂದ
ಭೂವೈಕುಂಠ ನಿಲಯ ಶ್ರೀ ಶ್ರೀನಿವಾಸದೇವರ ವಿನೂತನವಾದ ವಿಶಿಷ್ಟವಾದ ಮಂಗಳ ಮಹೋತ್ಸವ
“ಶ್ರೀ ವಾರಿ ಸೇವೆ”
ಹಮ್ಮಿಕೊಳ್ಳಲಾಗಿದೆ.
ಶ್ರೀವಾರಿ ಸೇವೆಯಲ್ಲಿ ಸರ್ವೋತ್ತಮನಿಗೆ ಸಮರ್ಪಿಸುವ ಸೇವಾ ವಿವರ:
ಗಂಗಾಜನಕನಾದ ಶ್ರೀಭೂ ಸಮೇತ ಶ್ರೀ ಶ್ರೀನಿವಾಸನಿಗೆ
“ತಿರುಮಜ್ಜನ”
ಭವತಾರಕ ಶ್ರೀ ವಿಷ್ಣುಸಹಸ್ರ ನಾಮೋಚ್ಛಾರಣೆಯೊಂದಿಗೆ ಶ್ರೀಶನಿಗೆ
“ಲಕ್ಷ ಪುಷ್ಪಾರ್ಚನೆ”
ಹಯವದನ ತನ್ನ ಪ್ರಿಯಳಾದ ಲಕುಮಿಗೆ ಜಯವಿತ್ತ
“ಶ್ರೀ ಲಕ್ಷ್ಮೀ ಶೋಭಾನೆ ಸಾಮೂಹಿಕ ಪಠಣ”
ಸರ್ವನಿಯಾಮಕನಾದ ಶೇಷಶಾಯಿಗೆ
“ಡೋಲೋತ್ಸವ (ಉಯ್ಯಾಲೋತ್ಸವ)”
ಪರಾತ್ಪರನ ದರ್ಶನ ಪರಮ ಭಾಗವತರ ಸಂದರುಶನ ಪುಣ್ಯ ವಿಶೇಷದ ಸಂಪಾದನೆಗಾಗಿ ಒದಗಿ ಬಂದಿರುವ
ಈ ಸುಸಂದರ್ಭದಲ್ಲಿ ನಾವೆಲ್ಲರೂ ಭಾಗಿಯಾಗೋಣ.
ದಿನಾಂಕ : 22.02.2009 (ಭಾನುವಾರ)
ಸಮಯ: ಸಂಜೆ 5PM ರಿಂದ 8.30PM ರವರೆಗೆ
ಸ್ಥಳ: ಶತಮಾನೋತ್ಸವ ಭವನ, ಶಾರದಾ ವಿಲಾಸ ಕಾಲೇಜು, ಕೃಷ್ಣಮೂರ್ತಿಪುರಂ, ಮೈಸೂರು-04.
ನಿರ್ವಹಣೆ
:ಶ್ರೀ ಎಸ್. ವೆಂಕಟೇಶಮೂರ್ತಿ, ಬೆಂಗಳೂರು.
ಸಹಕಾರ: ಶ್ರೀ ಲಕ್ಷ್ಮೀಶೋಭಾನ ಬಳಗ, ಶ್ರೀ ಉತ್ತರಾದಿ ಮಠ, ಮೈಸೂರು.
ಪರಿಕಲ್ಪನೆ : ಮಾಧ್ವ ಯುವ ವೇದಿಕೆ, ಶ್ರೀ ಉತ್ತರಾದಿ ಮಠ, ಮೈಸೂರು.
-ಸೇವಕನೆಲೊ ನಾನು ನಿನ್ನಯ ಪಾದ ಸೇವೆಯ ನೀಡೆಲೊ ನೀನು-
ಸರ್ವರಿಗೂ ಸ್ವಾಗತ
ತಾವೂ ಬನ್ನಿ......... ತಮ್ಮವರನ್ನೂ ಕರೆತನ್ನಿ...........
ವಿ.ಸೂ. ಈ ಕಾರ್ಯಕ್ರಮಕ್ಕೆ ಬರವವರೆಲ್ಲರೂ ದಯವಿಟ್ಟು ಸಾಂಪ್ರದಾಯಿಕ ಉಡುಪಿನಲ್ಲಿ ಬರತಕ್ಕದ್ದು.
For more details contact:
ORGANISING COMMITTE CORE MEMBERS
Bhanupradeep.N-9880248292, Guruprasad.G-9844076899,
Krishna sudhi-9880546668, Madhusudhan.K.P.-9986188436,
Giridhar-9342443331, Madhusudhan-9008712056

Tuesday, December 16, 2008

ಅರಮನೆಯ ಶ್ರೀ ಮುಖ್ಯ ಪ್ರಾಣದೇವರಿಗೆ ಪಂಚಾಮೃತ ಅಭಿಷೇಕ

ಶ್ರೀ ದಿಗ್ವಿಜಯಮೂಲರಾಮೋವಿಜಯತೇ
ಮಾಧ್ವ ಯುವ ವೇದಿಕೆ
ಶ್ರೀ ಉತ್ತರಾದಿ ಮಠ, ಮೈಸೂರು
.
ದಿನಾಂಕ : 21.12.2008 (ಭಾನುವಾರ, ಮಾರ್ಗಶೀರ್ಷ ಬಹುಳ ನವಮಿ, ಅಮೃತ ಸಿದ್ಧಿಯೋಗ) ರಂದು ನಮ್ಮ ಮಾಧ್ವ ಯುವ ವೇದಿಕೆಯ ವತಿಯಿಂದ ಮೈಸೂರು ಅರಮನೆಯಲ್ಲಿರುವ ಅರ್ಜುನ ಪ್ರತಿಷ್ಠೆಯ ಶ್ರೀ ಮುಖ್ಯಪ್ರಾಣದೇವರಿಗೆ ಶ್ರೀ ಹರಿವಾಯುಸ್ತುತಿ ಪುನಶ್ಚರಣ ಸಮೇತ ಪಂಚಾಮೃತ ಅಭಿಷೇಕವನ್ನು ಏರ್ಪಡಿಸಿರುತ್ತೇವೆ. ತಾವು ದಯಾಮಾಡಿ ಸರಿಯಾದ ಸಮಯಕ್ಕೆ ಆಗಮಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
ಸ್ಥಳ : ಏಣಿ ಆಂಜನೇಯ ಸ್ವಾಮಿ ದೇವಸ್ಥಾನ,
ವರಾಹ ಗೇಟ್ ಬಳಿ, (ಗನ್ ಹೌಸ್ ಎದುರು), ಅರಮನೆ. ಮೈಸೂರು.
ಸಮಯ : ಬೆಳಿಗ್ಗೆ 7.30 ಗಂಟೆಗೆ

ಸೇವಾರ್ಥದಾರರು -ಕು. ಪಲ್ಲವಿ ಮತ್ತು ಮನೆಯವರು, ವಿದ್ಯಾರಣ್ಯಪುರಂ, ಮೈಸೂರು.
For more details please contact: Mr. Guruprasad. G-9844076899

Wednesday, March 26, 2008

ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀ ಪಾದಂಗಳವರ ಮೈಸೂರು ದಿಗ್ವಿಜಯ

||ಹರಿ ಸರ್ವೋತ್ತಮ |ವಾಯು ಜೀವೋತ್ತಮ |ಹರ ವೈಷ್ಣವೋತ್ತಮ||

ಶ್ರೀ ಶ್ರೀ ಸತ್ಯಸಂಕಲ್ಪತೀರ್ಥರ ಆರಾಧನಾ ಮಹೋತ್ಸವ
6.04.208 (ಭಾನುವಾರ) ಮೈಸೂರಿನ ಶ್ರೀ ಉತ್ತರಾದಿ ಮಠದಲ್ಲಿ ವಿರಾಜಮಾನರಾಗಿರುವ ಗಂಗೆಯನ್ನು ಸಾಕ್ಷಾತ್ ಕರಿಸಿಕೊಂಡಿರುವ ಯತಿಗಳಾದ ಶ್ರೀ ಶ್ರೀ ಸತ್ಯಸಂಕಲ್ಪತೀರ್ಥರ ಆರಾಧನಾ ಮಹೋತ್ಸವ ಕಾರ್ಯಕ್ರಮಗಳು ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀ ಪಾದಂಗಳವರ ಉಪಸ್ಥಿತಿಯಲ್ಲಿ ಜರುಗಲಿವೆ.

Monday, March 24, 2008

Sri Digivjayamoolaramoviajyathe
|Hari Sarvottama | Vayu Jeevottama|
MADHWA YUVA VEDIKE,
SRI UTTARADI
MATH,
MYSORE.
On 22.03.2008 (Saturday) in Sri Uttaradi math, Mysore
Selection of Executive Board committee members took place. (Administration
)
Planning Committee
Sri Krishna Sudhi
Sri Madhusudhan.K.P.
Sri Bhanupradeep Pandurangi

Marketing Committee
Sri Giridhar
Sri Keerthi Narayan
Sri Vijyendra Naik
Finance Comitte
Sri Sudhakar
Sri S.S.Ravi
Sri G.Guruprasad
Operation Committe
Sri Madhusudhan
Madhwesh Mannari
Sri Arjun
Sri Raghavendra .P
Sri Sanjeeva
Sri Srikanth
Cultural Committe
Smt. Deepika pandurangi
Smt. Chandrika
Note: All correspondence should be duly signed by any member of each of the committees. Only signed correspondence holds the validity.

Sunday, March 23, 2008

ಶ್ರೀ ಸತ್ಯಬೋಧತೀರ್ಥರ ಆರಾಧನೆ

ಶ್ರೀ ದಿಗ್ವಿಜಯಮೂಲರಾಮೋವಿಜಯತೇ
ನಮ್ಮ ವೇದಿಕೆಯವತಿಯಿಂದ ಮೈಸೂರಿನ ಶ್ರೀ ಉತ್ತರಾದಿ ಮಠದಲ್ಲಿ ದಿನಾಂಕ 22.03.2008 ಶನಿವಾರದಂದು ಸಂಜೆ ಶ್ರೀ ಸತ್ಯಬೋಧತೀರ್ಥರ ಆರಾದನೆಯನ್ನು ನಡೆಸಲಾಯಿತು. ಶ್ರೀ ಮುಖ್ಯಪ್ರಾಣದೇವರ ಪಲ್ಲಕ್ಕಿ ಉತ್ಸವ ಮತ್ತು ಅತಿ ವಿಜೃಂಭ್ರಣೆಯಿಂದ ನಡೆಸಲಾಯಿತು. ಉತ್ಸವದವನ್ನು ಪಂ.ಶ್ರೀ ಪುರುಷೋತ್ತಮಾಚಾರ್ಯ ಪುರೋಹಿತ್ ಇವರ ನೇತೃತ್ವದಲ್ಲಿ ನಡೆಸಲಾಯಿತು. ಈ ಆರಾಧನೆಯ ಸೇವೆಯನ್ನು, ಶ್ರೀಮತಿ ಶ್ರೀ ಗುರುರಾಜ್, ಮೈಸೂರು ಇವರು ನಡೆಸಿಕೊಟ್ಟರು.